ಕಲೆ, ವಾಣಿಜ್ಯ, ವಿಜ್ಞಾನ ವಿಭಾಗಗಳ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು
ಆಯೋಜನೆ: ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ, ಹಾಗೂ ಪತ್ರಿಕೋದ್ಯಮ ವಿಭಾಗ, ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು
ದಿನಾಂಕ: 26-27 ಜೂನ್ 2025
ಸ್ಥಳ: ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿಶ್ವವಿದ್ಯಾನಿಲಯ
ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
https://forms.gle/FKQ6zTEW3zS8ykx16
imPRESSion-2025 ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ. ಇದು ಪತ್ರಿಕೋದ್ಯಮ/ ಮಾಧ್ಯಮ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ಮುಕ್ತವಾಗಿದೆ. ಪ್ರತೀ ಸ್ಪರ್ಧೆಯು ಮೂರು ಬಹುಮಾನಗಳನ್ನು ಹೊಂದಿರುತ್ತದೆ. ಹೆಚ್ಚು ಅಂಕ ಗಳಿಸುವ ತಂಡಕ್ಕೆ ಸಮಗ್ರ ಛಾಂಪಿಯನ್‌ಶಿಪ್ ನೀಡಲಾಗುತ್ತದೆ.
ಕೆಲವು ಪ್ರಮುಖ ಸೂಚನೆಗಳು:
• ಕರ್ನಾಟಕದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
• ಪ್ರತೀ ಸ್ಪರ್ಧಾರ್ಥಿಯೂ ತಮ್ಮ ಸಂಸ್ಥೆಯ ಗುರುತಿನ ಪತ್ರವನ್ನು ಹೊಂದಿರುವುದು ಕಡ್ಡಾಯ.
• ಸ್ಪರ್ಧೆಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ವಿವಿಧ ವಿಭಾಗಗಳ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ವಿದ್ಯಾರ್ಥಿಗಳೂ ಭಾಗವಹಿಸಬಹುದು.
• ಭಾಗವಹಿಸುವವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯನ್ನು ಬಳಸಬಹುದು.
• ಒಬ್ಬ ವಿದ್ಯಾರ್ಥಿ ಗರಿಷ್ಠ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಆದರೆ ಇವರು ಹೆಚ್ಚುವರಿಯಾಗಿ ಗ್ರೂಪ್ ಡ್ಯಾನ್ಸ್ ತಂಡದ ಒಬ್ಬ ಸದಸ್ಯರಾಗಿ ಇರಬಹುದು.
• ಮೂರಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಒಬ್ಬ ಅಭ್ಯರ್ಥಿಯು ಭಾಗವಹಿಸಿದ್ದು ಕಂಡುಬಂದರೆ ಆ ತಂಡವನ್ನು ಅನರ್ಹಗೊಳಿಸಲಾಗುವುದು.
• ಪ್ರತಿ ಸ್ಪರ್ಧೆಗೆ ಒಂದು ಕಾಲೇಜು/ವಿಭಾಗದಿಂದ ಒಬ್ಬರಿಗಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಬಹುದು; ಆದರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ತೊಂದರೆಯಾಗದಂತೆ ಸ್ವತಃ ಅಭ್ಯರ್ಥಿಗಳೇ ಗಮನಹರಿಸಬೇಕು.
• ಕನಿಷ್ಠ 3 ಪ್ರವೇಶಗಳನ್ನು ಪಡೆದರೆ ಮಾತ್ರ ನಿರ್ದಿಷ್ಟ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಇಲ್ಲದಿದ್ದರೆ, ಸ್ಪರ್ಧೆಯನ್ನು ರದ್ದುಗೊಳಿಸಲಾಗುತ್ತದೆ.
• ಸ್ಪರ್ಧಾ ವಿಜೇತರಿಗೆ ಆಕರ್ಷಕ ನಗದು ಬಹುಮಾನ ಇದೆ.
• ಸ್ಪರ್ಧೆಗಳಲ್ಲಿ ಭಾಗವಹಿಸುವವರು ಪ್ರತಿ ಸ್ಪರ್ಧೆಗೂ ನೋಂದಣಿ ಶುಲ್ಕ ರೂ. 100-00 ಪಾವತಿಸಬೇಕಾಗುತ್ತದೆ.
• ಜೂನ್ 26ರಂದು ಸಂಜೆ ‘ಸಾಂಸ್ಕೃತಿಕ ವೈವಿಧ್ಯ’ ಇರುತ್ತದೆ. ಸ್ಪರ್ಧಾರ್ಥಿಗಳು ಕೂಡ ಕಾರ್ಯಕ್ರಮಗಳನ್ನು ನೀಡಬಹುದು. ಆದರೆ ಈ ಕುರಿತು ನಮ್ಮ ವಿದ್ಯಾರ್ಥಿ ಸಂಚಾಲಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು.
• ಪೂರ್ವ ಕೋರಿಕೆಯ ಮೇರೆಗೆ ಭಾಗವಹಿಸುವವರಿಗೆ ವಸತಿ ವ್ಯವಸ್ಥೆ ಮಾಡಲಾಗುವುದು.
• ಭಾಗವಹಿಸುವ ಎಲ್ಲರಿಗೂ ಎರಡೂ ದಿನವೂ ಊಟೋಪಚಾರದ ವ್ಯವಸ್ಥೆ ಇರಲಿದೆ.
ಏಕವ್ಯಕ್ತಿ ಸ್ಪರ್ಧೆಗಳು
1. ON-THE-SCENE - ವರದಿಗಾರಿಕೆ
(News
reporting)
ಸ್ಪರ್ಧಾರ್ಥಿಗಳು ಮಾಧ್ಯಮ ಹಬ್ಬದ ಉದ್ಘಾಟನಾ ಸಮಾರಂಭದ ವರದಿಯನ್ನು ಸಿದ್ಧಪಡಿಸಬೇಕಿರುತ್ತದೆ.
ವರದಿ 300 ಪದಗಳ ಒಳಗಿರಬೇಕು. ಸೂಕ್ತ ಫೋಟೋವನ್ನು ಒದಗಿಸಬೇಕು.
ವರದಿ ತಯಾರಿಸಲು ಒಂದು ಗಂಟೆ ಸಮಯಾವಕಾಶ ಇರುತ್ತದೆ.
2.LIGHTS, CAMERA & NEWS – ಟಿವಿ ಸುದ್ದಿ ಪ್ರಸ್ತುತಿ
(TV News
Presentation)
ಭಾಗವಹಿಸುವವರು 3-5 ನಿಮಿಷಗಳ ಟಿವಿ ಬುಲೆಟಿನ್ ಅನ್ನು ಸಿದ್ಧಪಡಿಸಬೇಕು ಮತ್ತು ಪ್ರಸ್ತುತಪಡಿಸಬೇಕು.
ಸ್ಕಿçಪ್ಟ್ ತಯಾರಿಸಲು 30 ನಿಮಿಷ ಸಮಯ ನೀಡಲಾಗುತ್ತದೆ.
ಸುದ್ದಿಗಳನ್ನು ಒದಗಿಸಲಾಗುವುದು.
3. THE CHATTERBOX - ರೇಡಿಯೋ ಜಾಕಿ
(Radio
Jockey)
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ 3 ನಿಮಿಷ ಸಮಯ ನೀಡಲಾಗುತ್ತದೆ.
ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.
4. PICTURE PERFECT- ಛಾಯಾಗ್ರಹಣ
(Spot
photography)
ಭಾಗವಹಿಸುವವರು ನೀಡಿದ ವಿಷಯದ ಮೇಲೆ ಎರಡು ಛಾಯಾಚಿತ್ರಗಳನ್ನು ಸಲ್ಲಿಸಬೇಕಾಗುತ್ತದೆ.
ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.
ಭಾಗವಹಿಸುವವರಿಗೆ 45 ನಿಮಿಷಗಳ ಸಮಯವನ್ನು ನೀಡಲಾಗುತ್ತದೆ.
ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮರಾ ಅಥವಾ ಮೊಬೈಲ್ ಫೋನ್ ಅನ್ನು ಬಳಸಬಹುದು.
5. CREATIVE BLEND- ಪೋಸ್ಟರ್ ವಿನ್ಯಾಸ
(Poster
designing)
ನೀಡಿದ ವಿಷಯದ ಮೇಲೆ ಭಾಗವಹಿಸುವವರು ಪೋಸ್ಟರ್ ಅನ್ನು ತಯಾರಿಸಬೇಕು.
ನೋಂದಣಿ ಸಮಯದಲ್ಲಿ ವಿಷಯವನ್ನು ನೀಡಲಾಗುವುದು.
ಪೋಸ್ಟರ್‌ಗಳನ್ನು ಜಲವರ್ಣ (ವಾಟರ್ ಕಲರ್) ಅಥವಾ ಕೊಲಾಜ್ ಬಳಸಿ ವಿನ್ಯಾಸಗೊಳಿಸಬಹುದು. ಸ್ಪರ್ಧಿಗಳು ಕೊಲಾಜ್ ಮಾಡಬಯಸಿದಲ್ಲಿ, ಪತ್ರಿಕೆಗಳು/ನಿಯತಕಾಲಿಕೆಗಳನ್ನು ಸರಬರಾಜು ಮಾಡಲಾಗುತ್ತದೆ.
ಡ್ರಾಯಿಂಗ್ ಶೀಟ್‌ಗಳನ್ನು ಸರಬರಾಜು ಮಾಡಲಾಗುವುದು. ಅಗತ್ಯ ಬಣ್ಣಗಳನ್ನು ಅಭ್ಯರ್ಥಿಗಳೇ ತರಬೇಕು.
6. STORY SPARK- ಪುಟ್ಕತೆ
(Mini
Story Writing)
ಇದು ಮಾಧ್ಯಮ ಹಬ್ಬಕ್ಕೆ ಮೊದಲೇ ನಡೆಯುವ ಸ್ಪರ್ಧೆ (ಪ್ರಿ-ಇವೆಂಟ್).
ಸ್ಪರ್ಧಾರ್ಥಿಗಳು 50 ಪದಗಳ ಮಿತಿಯಲ್ಲಿ ಕಥೆಯೊಂದನ್ನು ರಚಿಸಿ ಶೀರ್ಷಿಕೆ ನೀಡಬೇಕು.
ಕಥೆಯನ್ನು ದಿನಾಂಕ: 24-06-2025ರ ಸಂಜೆ 5-00 ಗಂಟೆ ಒಳಗೆ ಶ್ರೀ ವಿನಯ್ ಕುಮಾರ್ ಎಸ್.ಎಸ್., ಉಪನ್ಯಾಸಕರು, ಜೆಎಂಸಿ ವಿಭಾಗ ತುಮಕೂರು ವಿವಿ- ಇವರಿಗೆ ವಾಟ್ಸಾಪ್ (9964103366) ಮಾಡಬೇಕು.
ಈಗಾಗಲೇ ಪ್ರಕಟವಾಗಿರುವ ಕಥೆಗಳಿಗೆ ಅವಕಾಶವಿಲ್ಲ. ಕೃತಿಚೌರ್ಯ ಮಾಡುವಂತಿಲ್ಲ.
7. Reels Up- ರೀಲ್ಸ್ ಮೇಕಿಂಗ್
(Reels
Making)
ಮಾಧ್ಯಮಹಬ್ಬದ ಮೊದಲ ದಿನ ನಡೆಯುವ ಚಟುವಟಿಕೆಗಳನ್ನು ಆಧರಿಸಿ ಸ್ಪರ್ಧಾರ್ಥಿಗಳು ಎರಡು ರೀಲ್ಸ್ ಸಿದ್ಧಪಡಿಸಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಬೇಕು.
ರೀಲ್ಸ್ ಅನ್ನು ನಮ್ಮ ವಿಭಾಗದ ಖಾತೆ jmc_tumkur_university_official ಜೊತೆ collaborate ಮಾಡಬೇಕು.
ರೀಲ್ಸ್ ಲಿಂಕ್ ಅನ್ನು ನೋಂದಣಿ ಸಂದರ್ಭದಲ್ಲಿ ನೀಡುವ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು.
ರೀಲ್ಸ್ ಗುಣಮಟ್ಟ, ಕ್ರಿಯಾಶೀಲತೆ ಹಾಗೂ ರೀಚ್ ಗಮನಿಸಿ ಬಹುಮಾನ ನೀಡಲಾಗುವುದು.
8.YOURS TRULY- ಪಿಟಿಸಿ: ಪೀಸ್-ಟು-ಕ್ಯಾಮೆರಾ
(PTC:
Piece-to-Camera)
ಭಾಗವಹಿಸುವವರು 1 ನಿಮಿಷ PTC ನೀಡಬೇಕಾಗುತ್ತದೆ.
ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.
ಗುಂಪು ಸ್ಪರ್ಧೆಗಳು
1. CEASEFIRE- ಚರ್ಚಾ ಸ್ಪರ್ಧೆ
(Debate)
ಒಂದು ಕಾಲೇಜು/ವಿಭಾಗದಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು.
ಒಬ್ಬ ಸ್ಪರ್ಧಾಳು ವಿಷಯದ ಪರವಾಗಿ ಮತ್ತು ಇನ್ನೊಬ್ಬರು ಅದರ ವಿರುದ್ಧ ಮಾತನಾಡಬೇಕಾಗುತ್ತದೆ.
ಇಬ್ಬರನ್ನು ಒಳಗೊಂಡ ತಂಡಕ್ಕೆ ಬಹುಮಾನಗಳನ್ನು ನಿರ್ಣಯಿಸಲಾಗುತ್ತದೆ.
ನೋಂದಣಿ ಸಮಯದಲ್ಲಿ ವಿಷಯಗಳನ್ನು ನೀಡಲಾಗುವುದು.
2. QUIZOLOGICAL - ರಸಪ್ರಶ್ನೆ ಸ್ಪರ್ಧೆ
(Quiz
competition)
ಒಂದು ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಇರಬೇಕು.
ಪ್ರಾಥಮಿಕ ಸುತ್ತು (ಲಿಖಿತ) ಮತ್ತು ಅಂತಿಮ ಸುತ್ತು (ಮೌಖಿಕ) ಇರುತ್ತದೆ.
ಅಂತಿಮ ಸುತ್ತಿಗೆ ಮೂರು ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
ರಸಪ್ರಶ್ನೆಯು ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು ಮತ್ತು ಮಾಧ್ಯಮಗಳ ಕುರಿತಾಗಿ ಇರುತ್ತದೆ.
3. SWIFT BOOST- ಜಾಹೀರಾತು ನಿರ್ಮಾಣ
(Instant
advertising)
ಪ್ರತಿ ತಂಡವು 3-5 ಸದಸ್ಯರನ್ನು ಹೊಂದಿರಬೇಕು.
ತಂಡಗಳು ನೀಡಿದ ವಿಷಯದ ಮೇಲೆ ಜಾಹೀರಾತು ಕಿರುಚಿತ್ರವನ್ನು ಪ್ರಸ್ತುತಪಡಿಸಬೇಕು.
ಅವಧಿಯು ಒಂದು ನಿಮಿಷ ಇರುತ್ತದೆ. ನೋಂದಣಿ ಸಮಯದಲ್ಲಿ ವಿಷಯವನ್ನು ನೀಡಲಾಗುವುದು.
4. SYNC STEPS- ಗ್ರೂಪ್ ಡ್ಯಾನ್ಸ್
(Group Dance)
‘ಕರ್ನಾಟಕ ವೈಭವ’ – ಇದು ಸಮೂಹ ನೃತ್ಯದ ಥೀಮ್ ಆಗಿರುತ್ತದೆ.
ತಂಡದಲ್ಲಿ 6 ರಿಂದ 12 ಮಂದಿ ಇರಬಹುದು. ಧ್ವನಿಮುದ್ರಿತ ಹಾಡು ಬಳಸಬಹುದು.
ಅವಧಿ 5+1=6 ನಿಮಿಷ ಆಗಿರುತ್ತದೆ.
e-mail: journalismtut@gmail.com
0 Comments