Friday, September 20, 2024

ಮತ್ತೊಂದು ಸಾಧನೆ ಬರೆದ ತುಮಕೂರು ವಿವಿ: ಮೌಲ್ಯಮಾಪನ ಮುಗಿದ 5 ನಿಮಿಷದಲ್ಲಿ ಫಲಿತಾಂಶ ಪ್ರಕಟ!

ತುಮಕೂರು: ಸೆಪ್ಟೆಂಬರ್-2024 ರಲ್ಲಿ ಯು.ಯು.ಸಿ.ಎಂ.ಎಸ್. ತಂತ್ರಾಂಶದ ಮೂಲಕ ನಡೆಸಲಾದ ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಷಯದ ನಾಲ್ಕನೆಯ ಸೆಮಿಸ್ಟರ್ ಪರೀಕ್ಷಾ ಫಲಿತಾಂಶವನ್ನು ಮೌಲ್ಯಮಾಪನ ಮುಗಿದ ಐದೇ ನಿಮಿಷಗಳಲ್ಲಿ ಪ್ರಕಟಿಸುವ ಮೂಲಕ ತುಮಕೂರು ವಿಶ್ವವಿದ್ಯಾನಿಲಯವು ಹೊಸ ಮೈಲಿಗಲ್ಲೊಂದನ್ನು ಸಾಧಿಸಿದೆ.

"ಅತ್ಯಂತ ಕ್ಷಿಪ್ರವಾಗಿ ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸುವುದು ನಮ್ಮ ಆದ್ಯತೆ. ಆ ಮೂಲಕ ವಿದ್ಯಾರ್ಥಿಸ್ನೇಹಿ ವಿಶ್ವವಿದ್ಯಾನಿಲಯವಾಗಿ ತುಮಕೂರು ವಿಶ್ವವಿದ್ಯಾನಿಲಯವು ಹೊರಹೊಮ್ಮಿದೆ. ಈ ಕ್ಷಮತೆಯನ್ನು ವಿವಿಯು ಮುಂದೆಯೂ ಕಾಯ್ದುಕೊಳ್ಳಲಿದೆ," ಎಂದು ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಪ್ರಸನ್ನಕುಮಾರ್‌ ಕೆ. ತಿಳಿಸಿದ್ದಾರೆ.


ಸೆಪ್ಟೆಂಬರ್ 20, 2024ರಂದು ಸಂಜೆ ಫಲಿತಾಂಶ ಪ್ರಕಟಿಸಲಾಗಿದೆ. ತುಮಕೂರು ವಿವಿ ಎಂಎಸ್ಸಿ ಸಾವಯವ ರಸಾಯನಶಾಸ್ತ್ರ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಫಲಿತಾಂಶವನ್ನು ತಮ್ಮ ಯು.ಯು.ಸಿ.ಎಂ.ಎಸ್. ಲಾಗಿನ್‌ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಈ ನಡೆಗೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ವಿಶ್ವವಿದ್ಯಾನಿಲಯದ ಕಾರ್ಯವೈಖರಿ ಕುರಿತು ತಾವು ಹೆಮ್ಮೆಪಡುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

No comments:

Post a Comment