imPRESSion-2026: ರಾಜ್ಯಮಟ್ಟದ ಮಾಧ್ಯಮ ಹಬ್ಬ
ಕಲೆ, ವಾಣಿಜ್ಯ, ವಿಜ್ಞಾನ ವಿಭಾಗಗಳ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು
ಆಯೋಜನೆ: ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ, ಹಾಗೂ ಪತ್ರಿಕೋದ್ಯಮ ವಿಭಾಗ, ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು
ದಿನಾಂಕ: 18-19 ಮೇ 2026
ಸ್ಥಳ: ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿಶ್ವವಿದ್ಯಾನಿಲಯ
ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ:
https://forms.gle/EQcerLwaGZ9Nrm1K8
imPRESSion-2026 ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ. ಇದು ಪತ್ರಿಕೋದ್ಯಮ / ಮಾಧ್ಯಮ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ಮುಕ್ತವಾಗಿದೆ. ಪ್ರತೀ ಸ್ಪರ್ಧೆಯು ಮೂರು ಬಹುಮಾನಗಳನ್ನು ಹೊಂದಿರುತ್ತದೆ. ಹೆಚ್ಚು ಅಂಕ ಗಳಿಸುವ ತಂಡಕ್ಕೆ ಸಮಗ್ರ ಛಾಂಪಿಯನ್‌ಶಿಪ್ ನೀಡಲಾಗುತ್ತದೆ.
ಕೆಲವು ಪ್ರಮುಖ ಸೂಚನೆಗಳು:
- ಕರ್ನಾಟಕದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.
- ಪ್ರತೀ ಸ್ಪರ್ಧಾರ್ಥಿಯೂ ತಮ್ಮ ಸಂಸ್ಥೆಯ ಗುರುತಿನ ಪತ್ರವನ್ನು ಹೊಂದಿರುವುದು ಕಡ್ಡಾಯ.
- ಸ್ಪರ್ಧೆಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ವಿವಿಧ ವಿಭಾಗಗಳ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ವಿದ್ಯಾರ್ಥಿಗಳೂ ಭಾಗವಹಿಸಬಹುದು.
- ಭಾಗವಹಿಸುವವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯನ್ನು ಬಳಸಬಹುದು.
- ಒಬ್ಬ ವಿದ್ಯಾರ್ಥಿ ಗರಿಷ್ಠ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಆದರೆ ಇವರು ಹೆಚ್ಚುವರಿಯಾಗಿ ಗ್ರೂಪ್ ಡ್ಯಾನ್ಸ್ ತಂಡದ ಒಬ್ಬ ಸದಸ್ಯರಾಗಿ ಇರಬಹುದು.
- ಮೂರಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಒಬ್ಬ ಅಭ್ಯರ್ಥಿಯು ಭಾಗವಹಿಸಿದ್ದು ಕಂಡುಬಂದರೆ ಆ ತಂಡವನ್ನು ಅನರ್ಹಗೊಳಿಸಲಾಗುವುದು.
- ಪ್ರತಿ ಸ್ಪರ್ಧೆಗೆ ಒಂದು ಕಾಲೇಜು/ವಿಭಾಗದಿಂದ ಒಬ್ಬರಿಗಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಬಹುದು; ಆದರೆ ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ತೊಂದರೆಯಾಗದಂತೆ ಸ್ವತಃ ಅಭ್ಯರ್ಥಿಗಳೇ ಗಮನಹರಿಸಬೇಕು.
- ಕನಿಷ್ಠ 3 ಪ್ರವೇಶಗಳನ್ನು ಪಡೆದರೆ ಮಾತ್ರ ನಿರ್ದಿಷ್ಟ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಇಲ್ಲದಿದ್ದರೆ, ಸ್ಪರ್ಧೆಯನ್ನು ರದ್ದುಗೊಳಿಸಲಾಗುತ್ತದೆ.
- ಸ್ಪರ್ಧಾ ವಿಜೇತರಿಗೆ ಆಕರ್ಷಕ ನಗದು ಬಹುಮಾನ ಇದೆ.
- ಸ್ಪರ್ಧೆಗಳಲ್ಲಿ ಭಾಗವಹಿಸುವವರು ಪ್ರತಿ ಸ್ಪರ್ಧೆಗೂ ನೋಂದಣಿ ಶುಲ್ಕ ರೂ. 100-00 ಪಾವತಿಸಬೇಕಾಗುತ್ತದೆ.
- ಜೂನ್ 26ರಂದು ಸಂಜೆ ‘ಸಾಂಸ್ಕೃತಿಕ ವೈವಿಧ್ಯ’ ಇರುತ್ತದೆ. ಸ್ಪರ್ಧಾರ್ಥಿಗಳು ಕೂಡ ಕಾರ್ಯಕ್ರಮಗಳನ್ನು ನೀಡಬಹುದು. ಆದರೆ ಈ ಕುರಿತು ನಮ್ಮ ವಿದ್ಯಾರ್ಥಿ ಸಂಚಾಲಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು.
- ಪೂರ್ವ ಕೋರಿಕೆಯ ಮೇರೆಗೆ ಭಾಗವಹಿಸುವವರಿಗೆ ವಸತಿ ವ್ಯವಸ್ಥೆ ಮಾಡಲಾಗುವುದು.
- ಭಾಗವಹಿಸುವ ಎಲ್ಲರಿಗೂ ಎರಡೂ ದಿನವೂ ಊಟೋಪಚಾರದ ವ್ಯವಸ್ಥೆ ಇರಲಿದೆ.
ಏಕವ್ಯಕ್ತಿ ಸ್ಪರ್ಧೆಗಳು
1. ON-THE-SCENE - ವರದಿಗಾರಿಕೆ
(News reporting)
- ಸ್ಪರ್ಧಾರ್ಥಿಗಳು ಮಾಧ್ಯಮ ಹಬ್ಬದ ಉದ್ಘಾಟನಾ ಸಮಾರಂಭದ ವರದಿಯನ್ನು ಸಿದ್ಧಪಡಿಸಬೇಕಿರುತ್ತದೆ.
- ವರದಿ 300 ಪದಗಳ ಒಳಗಿರಬೇಕು. ಸೂಕ್ತ ಫೋಟೋವನ್ನು ಒದಗಿಸಬೇಕು.
- ವರದಿ ತಯಾರಿಸಲು ಒಂದು ಗಂಟೆ ಸಮಯಾವಕಾಶ ಇರುತ್ತದೆ.
2.LIGHTS, CAMERA & NEWS – ಟಿವಿ ಸುದ್ದಿ ಪ್ರಸ್ತುತಿ
(TV News Presentation)
- ಭಾಗವಹಿಸುವವರು 3-5 ನಿಮಿಷಗಳ ಟಿವಿ ಬುಲೆಟಿನ್ ಅನ್ನು ಸಿದ್ಧಪಡಿಸಬೇಕು ಮತ್ತು ಪ್ರಸ್ತುತಪಡಿಸಬೇಕು.
- ಸ್ಕ್ರಿಪ್ಟ್ ತಯಾರಿಸಲು 30 ನಿಮಿಷ ಸಮಯ ನೀಡಲಾಗುತ್ತದೆ.
- ಸುದ್ದಿಗಳನ್ನು ಒದಗಿಸಲಾಗುವುದು.
3. THE CHATTERBOX - ರೇಡಿಯೋ ಜಾಕಿ
(Radio Jockey)
- ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ 3 ನಿಮಿಷ ಸಮಯ ನೀಡಲಾಗುತ್ತದೆ.
- ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.
4. PICTURE PERFECT- ಛಾಯಾಗ್ರಹಣ
(Spot photography)
- ಭಾಗವಹಿಸುವವರು ನೀಡಿದ ವಿಷಯದ ಮೇಲೆ ಎರಡು ಛಾಯಾಚಿತ್ರಗಳನ್ನು ಸಲ್ಲಿಸಬೇಕಾಗುತ್ತದೆ.
- ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.
- ಭಾಗವಹಿಸುವವರಿಗೆ 45 ನಿಮಿಷಗಳ ಸಮಯವನ್ನು ನೀಡಲಾಗುತ್ತದೆ.
- ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮರಾ ಅಥವಾ ಮೊಬೈಲ್ ಫೋನ್ ಅನ್ನು ಬಳಸಬಹುದು.
5. CREATIVE BLEND- ಪೋಸ್ಟರ್ ವಿನ್ಯಾಸ
(Poster designing)
- ನೀಡಿದ ವಿಷಯದ ಮೇಲೆ ಭಾಗವಹಿಸುವವರು ಪೋಸ್ಟರ್ ಅನ್ನು ತಯಾರಿಸಬೇಕು.
- ನೋಂದಣಿ ಸಮಯದಲ್ಲಿ ವಿಷಯವನ್ನು ನೀಡಲಾಗುವುದು.
- ಪೋಸ್ಟರ್‌ಗಳನ್ನು ಜಲವರ್ಣ (ವಾಟರ್ ಕಲರ್) ಅಥವಾ ಕೊಲಾಜ್ ಬಳಸಿ ವಿನ್ಯಾಸಗೊಳಿಸಬಹುದು. ಸ್ಪರ್ಧಿಗಳು ಕೊಲಾಜ್ ಮಾಡಬಯಸಿದಲ್ಲಿ, ಪತ್ರಿಕೆಗಳು/ನಿಯತಕಾಲಿಕೆಗಳನ್ನು ಸರಬರಾಜು ಮಾಡಲಾಗುತ್ತದೆ.
- ಡ್ರಾಯಿಂಗ್ ಶೀಟ್‌ಗಳನ್ನು ಸರಬರಾಜು ಮಾಡಲಾಗುವುದು. ಅಗತ್ಯ ಬಣ್ಣಗಳನ್ನು ಅಭ್ಯರ್ಥಿಗಳೇ ತರಬೇಕು.
6. STORY SPARK- ಪುಟ್ಕತೆ
(Mini Story Writing)
- ಇದು ಮಾಧ್ಯಮ ಹಬ್ಬಕ್ಕೆ ಮೊದಲೇ ನಡೆಯುವ ಸ್ಪರ್ಧೆ (ಪ್ರಿ-ಇವೆಂಟ್).
- ಸ್ಪರ್ಧಾರ್ಥಿಗಳು 50 ಪದಗಳ ಮಿತಿಯಲ್ಲಿ ಕಥೆಯೊಂದನ್ನು ರಚಿಸಿ ಶೀರ್ಷಿಕೆ ನೀಡಬೇಕು.
- ಕಥೆಯನ್ನು ದಿನಾಂಕ: 24-06-2025ರ ಸಂಜೆ 5-00 ಗಂಟೆ ಒಳಗೆ ಶ್ರೀ ವಿಷ್ಣುಧರನ್, ಉಪನ್ಯಾಸಕರು, ಜೆಎಂಸಿ ವಿಭಾಗ ತುಮಕೂರು ವಿವಿ- ಇವರಿಗೆ ವಾಟ್ಸಾಪ್ (9353317427) ಮಾಡಬೇಕು.
- ಈಗಾಗಲೇ ಪ್ರಕಟವಾಗಿರುವ ಕಥೆಗಳಿಗೆ ಅವಕಾಶವಿಲ್ಲ. ಕೃತಿಚೌರ್ಯ ಮಾಡುವಂತಿಲ್ಲ.
7. Reels Up- ರೀಲ್ಸ್ ಮೇಕಿಂಗ್
(Reels Making)
- ಮಾಧ್ಯಮಹಬ್ಬದ ಮೊದಲ ದಿನ ನಡೆಯುವ ಚಟುವಟಿಕೆಗಳನ್ನು ಆಧರಿಸಿ ಸ್ಪರ್ಧಾರ್ಥಿಗಳು ಎರಡು ರೀಲ್ಸ್ ಸಿದ್ಧಪಡಿಸಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಬೇಕು.
- ರೀಲ್ಸ್ ಅನ್ನು ನಮ್ಮ ವಿಭಾಗದ ಖಾತೆ jmc_tumkur_university_official ಜೊತೆ collaborate ಮಾಡಬೇಕು.
- ರೀಲ್ಸ್ ಲಿಂಕ್ ಅನ್ನು ನೋಂದಣಿ ಸಂದರ್ಭದಲ್ಲಿ ನೀಡುವ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು.
- ರೀಲ್ಸ್ ಗುಣಮಟ್ಟ, ಕ್ರಿಯಾಶೀಲತೆ ಹಾಗೂ ರೀಚ್ ಗಮನಿಸಿ ಬಹುಮಾನ ನೀಡಲಾಗುವುದು.
8.YOURS TRULY- ಪಿಟಿಸಿ: ಪೀಸ್-ಟು-ಕ್ಯಾಮೆರಾ
(PTC: Piece-to-Camera)
- ಭಾಗವಹಿಸುವವರು 1 ನಿಮಿಷ PTC ನೀಡಬೇಕಾಗುತ್ತದೆ.
- ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.
ಗುಂಪು ಸ್ಪರ್ಧೆಗಳು
1. CEASEFIRE- ಚರ್ಚಾ ಸ್ಪರ್ಧೆ
(Debate)
- ಒಂದು ಕಾಲೇಜು/ವಿಭಾಗದಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು.
- ಒಬ್ಬ ಸ್ಪರ್ಧಾಳು ವಿಷಯದ ಪರವಾಗಿ ಮತ್ತು ಇನ್ನೊಬ್ಬರು ಅದರ ವಿರುದ್ಧ ಮಾತನಾಡಬೇಕಾಗುತ್ತದೆ.
- ಇಬ್ಬರನ್ನು ಒಳಗೊಂಡ ತಂಡಕ್ಕೆ ಬಹುಮಾನಗಳನ್ನು ನಿರ್ಣಯಿಸಲಾಗುತ್ತದೆ.
- ನೋಂದಣಿ ಸಮಯದಲ್ಲಿ ವಿಷಯಗಳನ್ನು ನೀಡಲಾಗುವುದು.
2. QUIZOLOGICAL - ರಸಪ್ರಶ್ನೆ ಸ್ಪರ್ಧೆ
(Quiz competition)
- ಒಂದು ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಇರಬೇಕು.
- ಪ್ರಾಥಮಿಕ ಸುತ್ತು (ಲಿಖಿತ) ಮತ್ತು ಅಂತಿಮ ಸುತ್ತು (ಮೌಖಿಕ) ಇರುತ್ತದೆ.
- ಅಂತಿಮ ಸುತ್ತಿಗೆ ಮೂರು ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
- ರಸಪ್ರಶ್ನೆಯು ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು ಮತ್ತು ಮಾಧ್ಯಮಗಳ ಕುರಿತಾಗಿ ಇರುತ್ತದೆ.
3. SWIFT BOOST- ಜಾಹೀರಾತು ನಿರ್ಮಾಣ
(Instant advertising)
- ಪ್ರತಿ ತಂಡವು 3-5 ಸದಸ್ಯರನ್ನು ಹೊಂದಿರಬೇಕು.
- ತಂಡಗಳು ನೀಡಿದ ವಿಷಯದ ಮೇಲೆ ಜಾಹೀರಾತು ಕಿರುಚಿತ್ರವನ್ನು ಪ್ರಸ್ತುತಪಡಿಸಬೇಕು.
- ಅವಧಿಯು ಒಂದು ನಿಮಿಷ ಇರುತ್ತದೆ. ನೋಂದಣಿ ಸಮಯದಲ್ಲಿ ವಿಷಯವನ್ನು ನೀಡಲಾಗುವುದು.
4. SYNC STEPS- ಗ್ರೂಪ್ ಡ್ಯಾನ್ಸ್
(Group Dance)
- ‘ಕರ್ನಾಟಕ ವೈಭವ’ – ಇದು ಸಮೂಹ ನೃತ್ಯದ ಥೀಮ್ ಆಗಿರುತ್ತದೆ.
- ತಂಡದಲ್ಲಿ 6 ರಿಂದ 12 ಮಂದಿ ಇರಬಹುದು. ಧ್ವನಿಮುದ್ರಿತ ಹಾಡು ಬಳಸಬಹುದು.
- ಅವಧಿ 5+1=6 ನಿಮಿಷ ಆಗಿರುತ್ತದೆ.
- ಪ್ರದೀಪ್ ಡಿ.ಎಸ್., ದ್ವಿತೀಯ ಎಂ.ಎ. (ಜೆಎಂಸಿ) : 6362099062
- ಛಾಯಾ ಬಿ. ದ್ವಿತೀಯ ಎಂ.ಎ. (ಜೆಎಂಸಿ) : 7349265590
- ಚಂದು ಎಂ. ಪ್ರಥಮ ಎಂ.ಎ. (ಜೆಎಂಸಿ) : 6363711772
- ಚೇತನ್ ಕೆ. ಆರ್. ಪ್ರಥಮ ಎಂ.ಎ. (ಜೆಎಂಸಿ) : 9845155472
- ಭೂಮಿಕಾ ಶಂಕರ್ ದ್ವಿತೀಯ ಬಿಎ : 7348866510
- ಡಾ. ಪೃಥ್ವೀರಾಜ ಟಿ. : 9743047810
- ಡಾ. ಸುಲೋಚನ ಜಿ. ಎಸ್. : 9743817027
- ಶ್ರೀ. ವಿಷ್ಣುಧರನ್ : 9353317427
- ಡಾ. ಗಿರಿಜಮ್ಮ ಜಿ. : 9620829643
- ಶ್ರೀ ಹರೀಶ್ ಕುಮಾರ್ ಬಿ.ಸಿ. : 8880054004
- ಕು. ಕಮಲಮ್ಮ ಎಸ್. : 9108532034
- ಕು. ತನುಶ್ರೀ : 89714 31486
- ಶ್ರೀ ಚನ್ನಬಸವ ಎಂ. : 9019137896
e-mail: journalismtut@gmail.com
0 Comments